ಮರುಳಸಿದ್ಧ 2 -
ವೀರಶೈವ ಆಚಾರ್ಯರು. ಇವರು ರೇವಣಸಿದ್ಧರ ಶಿಷ್ಯ ಎಂದು ಶ್ರೀಪತಿ ಪಂಡಿತ ವಿರಚಿತ ಶ್ರೀಕರಭಾಷ್ಯ ಮತ್ತು ಮರುಳಸಿದ್ಧ ಕಾವ್ಯಗಳಲ್ಲಿ ದೇವರ ಅದೃಷ್ಟ ಪ್ರಸಾದನಿಷ್ಠೆ, ಮರುಳಸಿದ್ಧ ದೇವರೆನ್ನ ಶ್ರೋತ್ರ ಎಂಬಲ್ಲಿ ಸೂಚಿಸಿರುವ ಮರುಳಸಿದ್ಧ ಇವರೇ ಇರಬೇಕು. ಇವರು ಕಗ್ಗಲ್ಲಗೌಡನಿಗೆ ಮಗುವಾಗಿ ಸಿಕ್ಕಿ, ಜಜ್ಜಕಂತೆ ಧರಿಸಿ, ಕೊಲ್ಲಾಪುರ ರಕ್ಕಸಿಯನ್ನು ಕೊಂದು, ಅವಳ ಅವಯವಗಳಿಂದ ಕಿನ್ನರ ವೀಣೆಯನ್ನು ಮಾಡಿಕೊಂಡು ಮರುಳನಂತೆ ಇದ್ದು ಉಜ್ಜಯಿನಿಯಲ್ಲಿ ಬಯಲಾದರೆಂದು ಪ್ರತೀತಿ. ಇವರ ವಿಷಯವಾಗಿ ದೇಪಕವಿಯ ಮರುಳಸಿದ್ಧ ಕಾವ್ಯ ಮುಂತಾದ ಗ್ರಂಥಗಳು ಹುಟ್ಟಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ